ನೀನು ಹಾರುವ ಬಿಳಿಹಕ್ಕಿ
ಬಾನಂಗಳಲ್ಲಿ ನನ್ನ ಹುಡುಕಿ
ಕೊನೆಗೂ ಆದೆ ಕೌತುಕಿ
ಕಂಗಾಲಾದ ಹಕ್ಕಿ
ಕಣ್ಗಾವಲಾದೆ ಸಾಕಿ
ಕೊನೆಗೂ ನೀ ಬಂದಿತನಾದೆ
ಪಂಜರದಲ್ಲಿ ಸಿಲುಕಿ
ಪ್ರೀತಿಯ ಊಟವ ಹಾಕಿ
ಸಾಕಿದೆ ನನ್ನ ಪ್ರಾಣಪಕ್ಷಿ
ನೀನು ಹಾರದ ಹಕ್ಕಿ
ನಾನು ಕಾಣದ ಚುಕ್ಕಿ
ಹಾರಿಹೋಯಿತ್ತು ಹಕ್ಕಿ
ಉಳಿಯಲಿಲ್ಲ ಋಣವ ಬಾಕಿ
ಕೊನೆಗೂ ಆದೆ ನೂಕಿ
ಮರುಕಳಿಸಿತ್ತು ನೆನಪು ಕಣ್ಣೀರ ತಾಕಿ
ನಾನು ಹೊಸದಾಗಿ ಬರೆದ ಕವಿತೆ
ಹೊಸತನ ತಂದ ಕವಿತೆ
Comments
Post a Comment