ಅಬ್ಬೆಪಾರಿ




ಬೀದಿಗೆ ಬಿದ್ದ ಅಬ್ಬೆಪಾರಿಯು
ತನ್ನ ಮನೆ ಹುಡುಕುತ್ತಿದ್ದಾನೆ
ಅಲೆಮಾರಿಯಂತೆ ಅಲೆದು ದಣಿದಿದ್ದಾನೆ

ತುತ್ತು ಅನ್ನಕ್ಕಾಗಿ ಪರದಾಡಿ
ತೊಟ್ಟು ನೀರು ಕುಡಿದು ನವೀರಾಗಿದ್ದಾನೆ

ಮೃಗಾಲಯದಿಂದ ತಪ್ಪಿಸಿಕೊಂಡು
ಸುಖದ ಮೆಟ್ಟಿಲೇರಲು ಪ್ರಯತ್ನಿಸುತ್ತಿದ್ದಾನೆ

ದಾರಿಯ ಮಧ್ಯ ಭೀಕ್ಷುಕನೊಬ್ಬ
ತುತ್ತು ಕೊಟ್ಟು ಪುಣ್ಯವಂತನಾಗಿದ್ದಾನೆ

ಯಾರು ದಿಕ್ಕಿಲ್ಲದ ಅಬ್ಬೆಪಾರಿಯು
ತನ್ನವರೆಲ್ಲರನ್ನು ನೆನೆಸಿಕೊಳ್ಳುತ್ತಿದ್ದಾನೆ

ಬೀದಿಗೆ ಬಿದ್ದ ಅಬ್ಬೆಪಾರಿಯು
ತನ್ನ ಮನೆ ಹುಡುಕುತ್ತಿದ್ದಾನೆ

Comments