Type Here to Get Search Results !

ಅಲೇಖ್ ನ ಬರಹಗಳು ೦೧ : Aalekhaaa Barahagalu 01




ದೂರದೂರಿದ
ಸಖಿಯೇ ನೀ
ಮುಗುಳನಗುವಾಗೆಲ್ಲ
ಮುಗ್ದನಂತೆ ಇಷ್ಟಪಟ್ಟೆ

ಮನದೂರಿಗೆ
ಬಂದು ಮರಳಿದ
ನಿನ್ನನ ಮರೆತಿಲ್ಲ
ನೆನಪಿಲ್ಲವೆಂದದ್ದು
ನೆಪ ಅಷ್ಟೆ

ಹೇ..
ನೀನಿಗ ಹೇಳಿದ್ದು
ಗೊತ್ತಿರದ ಸತ್ಯವೆನಲ್ಲ
ಇರಲಿ ಬಿಡು

ಹ್ಹ್......ಹಾ
ಹೋಗು ಹೋಗು
ನನ್ನ ಜೀವನ
ನೀನಿಲ್ಲದೇ ಈ ಜೀವ
ಬದುಕಲಾರದ ಬದುಕೆ!



2) ಕವಿ ವರ್ಣನೆ

ಕವಿ ಕಲ್ಪನೆಗೆ ಎಟುಕದ ಕಾವ್ಯವದು
ಕವಿ ಏನೋ ಕಂಡನು ರವಿ ಕಾಣದು
ಕಲ್ಪನೆಯಲ್ಲೂ ವಾಸ್ತವದಲ್ಲೂ
ಕಾಣಿಸದನು ಕಂಡರಿಯದನು
ಕವಿ ಎಂದು ಮನಮೆಚ್ಚಿ ಬರೆಯಲಾರನು

ಮಗು ಮುಗ್ದತೆ ತೋರುವ ಸುಂದರ ಕಾವ್ಯವದು
ಜನಮನ ಸೇರಿ ಮೆಚ್ಚಿಸುವ ಕಾವ್ಯಗಳೆಲ್ಲವು
ತಲ್ಲಣಿಸುವದು ಕವಿಮನ  ಮೆಚ್ಚುವವು
ತೀರದ ನೋವುಗಳಿಗೆ ಖುಷಿ ಅಮೃತವಿವು

ಕವಿಯ ವರ್ಣನೆಯು ಸಾಲದು
ಬಣ್ಣಬಣ್ಣದ ಕವಿತೆಗಳಾ! ಬಣ್ಣಿಸಲು
ಕವಿಮನ ಸೋಲುವುದೆ  ಕಾವ್ಯವ ವರ್ಣಿಸಲು
ಕವಿಕನಸುಗಾರನೊಳಗಿನ ಜಾಣನು ಸೋತ ವರ್ಣಿಸಲು

ಕವಿವರ್ಣನೆಯಲ್ಲವಿದು
ಕವಿತೆಗಳಾ ವರ್ಣನೆ
ಕವಿತೆಗಳಿಂದಾದವನು ಕವಿ
ಕವಿಯಿಂದಾದದ್ದು ಕವಿತೆ



3) ಇದು ಸುಳ್ಳು ಪ್ರೇಮ

ಮೋಹಿಸಿದನಂತೆ ಪುಸಲಾಯಿಸಿದನಂತೆ
ಕೈ ಕೊಟ್ಟನಂತೆ ಇವಳ್ ಬಿಟ್ಟಳಂತೆ
ನೆನಪಲ್ಲೆ ಇದ್ಳಂತೆ ಅದೆಲ್ಲ ಗುಡ್ಡೆಹಾಕಿದಳಂತೆ
ಕವಿತೆ ಅನ್ಕೊಂಡಳಂತೆ ಅಲ್ಲವಂತೆ
ಗೋಳು ಪುರಾಣ ಹರಿಕಥೆಯಂತೆ

ಮುಗ್ಮುರ್ಕೋಂಡವಳ ಮುಠ್ಠಾಳ ಜಾಣತನ
ಪ್ರೀತಿಸಿದವಳು ಅಂದ್ಳಂತೆ ಅವನು ಕಟುಕನಂತೆ
ಅವಳಿಗರಿವಿಲ್ಲದಿದ್ದದು ಅವನಸ್ತಿತ್ವವಂತೆ
ಅವನಿಗಿವಳದೇ ಧ್ಯಾನವಂತೆ ಮಾತ್ಕೊಟ್ಟಿದ್ಳಂತೆ

ಕೇಳಿದನಂತೆ ಸಲುಹದೇ ಸಹಿಸಲಾಗದೇ ದೋಷಿಸಲಾರೆಂದು ಕೊಟ್ಟದು ಯಾವ
ದೇವಭಕ್ತನು ನೀಡಿದ ಪ್ರಮಾಣ ಸುಮ್ಮನಿದ್ದಳಂತೆ
ಅವನು ಇದು ಸುಳ್ಳು ಪ್ರೇಮ ಅಂದನಂತೆ


4)  ಹನಿಗವನವಲ್ಲ

ನಿನಗೆ ಇಷ್ಟವಾದ ಮಾತ್ರಕ್ಕೆ ಅರ್ಥವಾಗದ
ವಿಷಯದ ಕುರಿತು ಬರೆಯುವುದು ನನ್ನಗಿಷ್ಟವಿಲ್ಲ
ಇದು ಮಾತಿಗ್ಮಾತಾಡುವ ಜನಜಂಗುಳಿಯ ಸಂತೆಯಲ್ಲ
ಅದರ ಹೊರತು ಅಕ್ಷರಗಳ ಕಾಳಗ ಹೊಸರೀತಿಯ ಸಾಹಿತ್ಯ

ಕಂತೆ ಕಂತೆಯಷ್ಟು ಹೊತ್ತ ನೆನಪುಗಳೆಲ್ಲವು
ಶಾಶ್ವತವಾಗಿ ಬರೆದು ಬಿಡು ಸುಧಾರಿಸಿಕೊಂಡರೆ
ಕಡ ಕೇಳುವೆ ಚೇತರಿಕೊಳ್ಳುವ ನೆಮ್ಮದಿಗೆ
ಕಾಕತಾಳಿಯವಾಗಿ ಕಲ್ಪಿಸಿಕೊಂಡರೆ ಹನಿಗವನವಲ್ಲ

ಕಲ್ಪನೆಯಲ್ಲೆ ಬದುಕುವವರು ಇರಬಹುದು
ಅದಕ್ಕೂ ವಾಸ್ತವ ಸಂಚಿಯ ನಂಟು ಬೆಳೆದಿರಬಹುದು
ನಿನ್ನ ಸಿಹಿ-ಕಹಿ ನೆನಪುಗಳಿಗೆ ಅಕ್ಷರರೂಪ ಮೆತ್ತು

ಕಪ್ಪು ಕಣ್ಣಕಾಡಿಗೆಯಂತೆ
ಮೇಬ್ಲಿನ ತುಟಿಲಿಪ್ಟ್ಸಿಕನಂತೆ
ವರ್ಣಿಸುವ ಕಲೆಗಾರನಂತೆ
ನೀ ಅಕ್ಷರಮೋಹಿಯ ಕವಿಯಾಗು


5) ಅದೃಷ್ಟದ ಡೋಂಬ್ರಾಟ

ಸೆರೆಸಿಕ್ಕವು ಅದೆಷ್ಟೋ ಅದೃಷ್ಟಗಳು
ನಿನ್ನ ತುಕಾಲಿ ಪ್ರೇಮದ ಕುಂಟ ನೆಪಗಳು
ಹೇಳಿದವು ಎಸೊಂದು ನಗ್ನಸತ್ಯಗಳು
ರಕುತ ಖಾರಿದ ನನ್ನ ಬಾವಕೋಶಗಳು
ಕಂಡು ಡೋಂಬ್ರಾಟವೆಂದರು ನಿನ್ನಂತಹ ಕನ್ಯಾಮಣಿಯರು

ಕತ್ತ್ಹಿಸುಕುವ ಕೆಂಡಾಮೃತದ ಮಡಿಹೂಗಳು
ತಾಂಡವಾಡುವ ಅದೃಷ್ಟದ ಡೋಂಬ್ರಾಟಗಳು
ಮರುಕಪಡುವ ಜೀವಂತಿಕೆಯ ಸತ್ಯಗಳು
ಋಣದಭಾರವ ಹೊರಲಾರದೇ ಹೈರಾಣಾದ ಮನಸ್ಸುಗಳು
ಜೀವಿಸಲಾಗದೇ ಹಿಡಿಮಣ್ಣು ಬೇಡುವ ಜೀವಗಳು
ಎಲ್ಲವೂ ಸೆರೆಸಿಕ್ಕವು ಎಲ್ಲರಕಣ್ಣೀರ್ಹನಿಗಳು
ವಿಧಿಯಿಲ್ಲದೇ ಒಪ್ಪಿಕೊಂಡೆ ನಾನು ಅದೃಷ್ಟದ ಡೋಂಬ್ರಾಟವೆಂದೆ

6)ರಿವರ್ಸ್ ಪಾರ್ಮುಲ್ಸಗಳು


ಪ್ರೇಮವಲ್ಲದ ಪ್ರೀತಿಯಿಂದ
ಮೋಹಿಸಿ ಮನಸ್ಸುಮುರ್ದು
ಇರುವುದನ್ನೆಲ್ಲ ಲಪ್ಟಾಯಿಸುವ ಪ್ರಯತ್ನಕ್ಕೆ

ದೋಚ್ಚಿಕೊಂಡು ಓಡಿ ಹೋಗಬಹುದೆಂಬ

ಲೆಕ್ಕಾಚಾರಗಳಿಗೆ ನೀನು ಕಂಡುಕೊಂಡ
ರಿವರ್ಸ ಪಾರ್ಮುಲ್ಸಗಳು ಚೆನ್ನಾಗಿದ್ದವು

ಆದರೆ ನೀನು ದೋಚಿದಾದರೇನು

ಬಳಕೆಯಾಗದೇ ಗುಜರಿಗೆ ಬಿದ್ದ ನನ್ನ ಖಾಲಿ ಮನಸ್ಸು
ಉಳಿದ ಮತ್ತದೇ ಕೊಳೆತ ನಿನ್ನ ಪ್ರೇಮದ ನೆನಪುಗಳು

Try to again touch 2 me and feel it my love
lets ready to move

7)ಜಸ್ಟ ಇಷ್ಟಪಡುವವನು ನಾನು

ಗೊತ್ತುಗುರಿ ಇಲ್ಲದವರನು ಹೊರತು
ಇರುವವರಿಗೂ ಹೊತ್ತು ಕಳೆಯೋದ್ ಗೊತ್ತು
ಅದೆಲ್ಲಾ ಹಾಳಾಗ್ಲಿ ನಿನ್ನ ಕಾರ್ಯ ಮಾಡು

ಇದೆಲ್ಲ ನಿನ್ನದೇ ಹೊಲಸು ಕಾರ್ಯ
ದುರ್ವಾಸನೆ ಇದ್ದರೆ ಮೂಗ್ಮುಚ್ಕೊಂಡು
ಸ್ವಚ್ಛಗೊಳಿಸು ಸತ್ತಮೇಲೂ ನಿನ್ನ ಹೇಸರ ಹೇಳಬಹುದೇನೊ

ನಿಲ್ಲಿಸ್ಬಿಡು ಇಲ್ಲವಾದರೆ
ನಿನ್ ಹೆೊಲಸು ಕಾರ್ಯವ ಕಲಿತು
ನೀನ್ಮಗಾನೂ ಎಕ್ಕುಟ್ಹೋದಾನು!

ನಿನ್ನದಲ್ಲ ಬೇಡ ಬೇಡವೆಂದರೂ
ಅಹುದು ಅಹುದೆಂದು ಬಚ್ಚಿಟ್ಟುಕೊಂಡೆ
ಇವಾಗ ಹೇಸಿಗೆ ಆಯ್ತಾ ಅನುಭವಿಸ್ತಿದ್ದೀಯಾ?

ಬಂದದ್ದು ಬರಲಿ ಹೋದದ್ದು ಹೋಗಲಿ
ಇರೋದ್ರಲಿ ತೃಪ್ತಿಪಡುವವರನು
ಜಸ್ಟ ಇಷ್ಟಪಡುವವನು ನಾನು

8)  ಮರ್ಯಾದೆ ಬಿಟ್ಟವನ ಮಾನಕ್ಕೆ


ಮರ್ಯಾದೆ ಬಿಟ್ಟವವನಿಗೆ
ಒಂದಿಷ್ಟು ಬೆಂಕಿ ಹಾಕಾ?
ನಿನ್ನ ಮ್ಯಾಲ ಮಣ್ಣ್ ಬೀಳಾ?
ಥೂ.. ಬೆವರ್ಸಿ ನನ್ಮಗನೇ....

ನಿನ್ನ ಮರ್ಯಾದೆಗೆ ಅವಳೇನು
ನಾಚಿಕೆ ಮಾನ ಒಳ್ಳೇದು ಕೆಟ್ಟದೆಂದು
ಫಾರ್ಮ್ ತುಂಬಿ ಒಳ್ಳೇಯವನಂತ
ಸರ್ಟಿಪಿಕೇಟ ಕೊಟ್ಲಳ್ಲಾ! ಹೇಗೆ.

ಸರ್ಟಿಪಿಕೇಟ ಕೊಟ್ಟಿರಲಿಕ್ಕಿಲ್ಲ
ಸರಿಯಾಗಿ ಕೈ ಕೊಟ್ಟಿರಬೇಕು
ಅದಕ್ಕೆ ಮಾನ ಮರ್ಯಾದೆ ಬಿಟ್ಹಂಗೆ
ಆಡತ್ತೀದ್ದಿಯಾ ನಿನ್ ಅವಳ ನಾಯಿಬಾಲ

9)   ಅಮ್ಮಾ ನೀಸುಮ್ಮನಿದ್ದ ಬಿಡು

ಮಗಾ...ಮಗಾ...ಅಂತ
ತುಂಬಾ ಸಲಗೆ ಕೊಟ್ಟಿಯಾ?

ಅವ್ನಿಗೂ ಕಷ್ಟ ಗೊತ್ತಾಗ್ಲಿ ಬಿಡಮ್ಮಾ
ಸದಾ ನಿನವನಿಗೆ ಮುದ್ ಮಾಡಿದ್ರು
ಕೊನೆಗಾಲದಲ್ಲಿ ನಿಂಗೆ ಗಂಜಿನೂ ಕೊಡಲ್ಲಮ್ಮಾ

ಜಯಿಸಿ ಬರಲೆಂದು ಕಳುಹಿಸಿದೆ
ಹೊತ್ತು ಕಳೆದು ಮರಳಿ ಬಂದಲ್ವಾ.
ಕೊನೆಗೂ ಮುಠ್ಠಾಳ ಅನ್ಸಗೊಂಡಲ್ವಾ.

ಮಗಾ...ಮಗಾ...ಅಂತ
ಜಾಸ್ತಿ ಸಲುಹಬೇಡ ಅವನ್ಮದಾಂತನೂ
ಜಾಸ್ತಿಯಾಗಬಹುದು ಅದ್ಸ್ವಲ್ಪ ಕಳಿಯಲಿ

ಅಮ್ಮಾ ನೀಸುಮ್ಮನಿದ್ದ ಬಿಡು
ಅವನು ಕಷ್ಟಾನಾರ್ಥಿಸಕೊಳ್ಳಿ ಇಲ್ಲಾಂದ್ರೆ
ಓಪ್ಪತ್ತಿನ ತುತ್ತಿಗೂ ನೀನೆ ಪರದಾಡತ್ತೀಯಾ...


10)  ಹುಚ್ಚು ಹೆಚ್ಚಿಸುವ ದರಿದ್ರ

ಹುಚ್ಚು ದರಿದ್ರ
ನಾಯಿಬಾಲ ಈಗ
ನಿನ್ನ ಪಾಲು ಸಾಕುಮಾಡು

ಓಣ ಪುರಾಣ ಊದುವ
ಪುಂಗಿಗೆ ಕಿವಿಕೊಟ್ಟೆಯಾ?
ನನ್ನ ಪ್ರೇಮ ಕವನ ಇಷ್ಟವಿಲ್ವಾ?

ಪ್ರಜ್ಞೆಯಿಲ್ಲದ ನಿನ್ನ ಅಮಲು
ನಂಜೇರಿಸಿಕೊಂಡು ತೆವಲುತ್ತಿದೆ
ಇದೆಲ್ಲಾ ದರಿದ್ರ ಹುಚ್ಚು ಬಿಟ್ಟುಬಿಡು

ನಿನ್ನ ತರ್ಕ ನನ್ನ ಕಡೆ
ಬಂದರೆ ತಡೆದಿಟ್ಟುಕೋ
ನನ್ನ ಓಣಜಂಭ ನಿನ್ನ ಸಾಯಿಸಿಬಿಟ್ಟಾತು?

ನನ್ನ ಮಾತ್ಕೇಳ್ತಿಯಾ ಹೇಳಾ?
ಹುಚ್ಚು ಹೆಚ್ಚಿಸುವ ದರಿದ್ರವನೆಲ್ಲಾ
ತೇರ್ಗಡೆಗೊಳ್ಳಿಸು ಪ್ರೀತಿ ಇದೀಯಾ ಇಟ್ಕೊ!










Top Post Ad

Below Post Ad