Type Here to Get Search Results !

ಅದುಮಿಟ್ಟ ಆತುಮ





ನೆನಪಿದೀಯಾ ನಿಂಗೆ

ಓ.....ನೆನಪಾಗುತ್ತಿಲ್ವಾ

ನನ್ನದೂರಿ ಸರಿದೋದ
ನಿನಗೆ ಸಿಕ್ಕವನು..
ಮಹಾಪುರುಷನಾ?

ಹಠಕ್ಕೆ ಬಿದ್ದು ಮಾತು

ಹೂತಿಟ್ಟುಕೊಂಡವನ..
ಸಲಗೆಯಲ್ಲಿ ತೃಪ್ತಿಯಿದೀಯಾ?

ಅವನ ಪೇಸ್ಬುಕ್ ಕವನಗಳಿಗೆ

ನೀ ಕೊಟ್ಟ ಮೇಬ್ಲಿನ್ ಲಿಪ್ಸ್ಟಿಕನ ಚುಂಬನ..
ಅವನಿಗೆ ಇಷ್ಟವಾಯಿತಾ?

ನಿನ್ನರ್ಧ ಸೌಂದರ್ಯಕ್ಕೆ

ಮೆಚ್ಚಿ ಬಂದವನ...
ಪ್ರೇಮವೆಲ್ಲ ನಿಜಾನಾ?

ಅದ್ಯಾಕೋ ನನ್ನ ಪ್ರಶ್ನಾರ್ಥಕಗಳಿಗೆ

ಕೇಳಿದ ಕಾರಣಕ್ಕೆ ನಿನ್ನ ಮಾತೆಲ್ಲ...
ಹೂತಿಟ್ಟೆ ನನ್ನಾತ್ಮವನ್ನು ಅದುಮಿಟ್ಟೆ

ಯಾಕೆ ಮಾರಾಯ್ತೀ

ನನ್ನ ನೆನಪಿಲ್ವಾ---

Top Post Ad

Below Post Ad